ವರದಿ ರಾಣಿ ಪ್ರಸನ್ನ
ಸಕಲೇಶಪುರ, ಆಲೂರಿನಲ್ಲಿ ಬಿರುಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗುತ್ತಿದೆ.
ವರುಣನ ಅಬ್ಬರ ಮುಂದುವರೆದಿರುವುದರಿಂದ ಮಲೆನಾಡು ಭಾಗದಲ್ಲಿ ವಿವಿಧ ರೀತಿಯ ಅನಾಹುತ ಘಟಿಸುತ್ತಿದೆ. ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಮಳೆ ಗಾಳಿಗೆ ದೈತ್ಯಾಕಾರದ ಮರ ಧರೆಗುರುಳಿರುವ ಘಟನೆ ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಮರ ಧರಾಶಾಹಿಯಾಗಿದೆ. ತಡೆಗೋಡೆ ಕಾಮಗಾರಿ ನಡೆಯುತ್ತಿರುವುದರಿಂದ ಎರಡು ದಿನಗಳ ಹಿಂದೆಯಷ್ಟೇ ಒಂದು
ಮರ ಧರೆಗುರುಳಿರುವ ಘಟನೆ ಸಕಲೇಶಪುರ ತಾಲ್ಲೂಕಿನ ದೋಣಿಗಾಲ್ ಬಳಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75 ಶಿರಾಡಿಘಾಟ್ ರಸ್ತೆಯಲ್ಲಿ ಮರ ಧರೆಗುರುಳಿವೆ . ತಡೆಗೋಡೆ ಕಾಮಗಾರಿ ನಡೆಯುತ್ತಿರುವುದರಿಂದ ಎರಡು ದಿನಗಳ ಹಿಂದೆಯಷ್ಟೇ ಒಂದು ಬದಿಯ ರಸ್ತೆ ಸಂಚಾರ ಬಂದ್ ಮಾಡಲಾಗಿತ್ತು.
ಇದರಿಂದ ಅದೃಷ್ಟವಶಾತ್ ಯಾವುದೇ ಅನಾಹುತ
ಸಂಭವಿಸಿಲ್ಲ. ಮತ್ತೊಂದು ಬದಿಯ ರಸ್ತೆಯಲ್ಲಿ ಎಲ್ಲಾ ವಾಹನಗಳು ಸಂಚರಿಸುತ್ತಿವೆ.
ಭಾರೀ ಮಳೆಯಾಗುತ್ತಿರುವುದರಿಂದ ಶಿರಾಡಿಘಾಟ್ ರಸ್ತೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಮರಗಳು ಬೀಳುವ ಸಾಧ್ಯತೆಯಿದ್ದು, ಆತಂಕದ ನಡುವೆಯೂ ವಾಹನ ಸವಾರರು ಸಂಚರಿಸಬೇಕಾಗಿದೆ.
ಶಿರಾಡಿಘಾಟ್‌ಗೆ ಸಂಕಷ್ಟ: ಮಳೆಯಿಂದ ಶಿರಾಡಿಘಾಟ್‌ನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಭಾರೀ ಗಾಳಿ ಮಳೆಗೆ ಎರಡೂ ಬದಿಯ ಭಾರೀ ಗಾತ್ರದ ಮರಗಳು ಬುಡಮೇಲಾಗಿ ಬೀಳುತ್ತಿವೆ.
ಕೊಂಚ ಯಡವಟ್ಟಾದ್ರೂ ಪ್ರಾಣಕ್ಕೆ ಕುತ್ತು ಎದುರಾಗಲಿದೆ. ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕಡಿದಾಗಿ ರಸ್ತೆ ಬಗೆದಿರುವುದರಿಂದ ರಸ್ತೆಯ ಎಡ-ಬಲಗಳಲ್ಲಿರುವ ಮರಗಳು ಯಾವಾಗ ಬೀಳುತ್ತವೆಯೋ ಎಂಬ ಆತಂಕ ಶುರುವಾಗಿದೆ.
ಈಗಾಗಲೇ ದೋಣಿಗಾಲ್ ಬಳಿ ನಿನ್ನೆ ದೊಡ್ಡ ಗಾತ್ರದ ಮರ ಬಿದ್ದಿರುವುದರಿಂದ ಒಂದು ಪಥದ ಸಂಚಾರ ಸ್ಥಗಿತಗೊಂಡಿದೆ.
ಮತ್ತೊಂದು ಬದಿಯಲ್ಲಿ ವಾಹನಗಳ ಸಂಚಾರಕ್ಕೆ ವ್ಯವಸ್ಥೆ
ಮಾಡಲಾಗಿದೆಯಾದರೂ, ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್‌ನ ಸಕಲೇಶಪುರದಿಂದ ಮಾರನಹಳ್ಳಿವರೆಗೆ ಆತಂಕ ಹೆಚ್ಚಾಗಿದೆ.
previous post
next post