ವರದಿ ರಾಣಿ ಪ್ರಸನ್ನ
ಹಾಸನದ ಖಾಸಗಿ ಶಾಲೆಯೊಂದಕ್ಕೆ ಇಂದು ಬಾಂಬ್ ಬೆದರಿಕೆ ಕರೆ.
ಹಾಸನದ ಖಾಸಗಿ ಶಾಲಾ-ಕಾಲೇಜಿಗೆ ಬಾಂಬ್ ಹಾಕುವ ಬೆದರಿಕೆ ಕರೆ ಬಂದಿದೆ. ಮೂರು ಶಾಲೆಗಳಿಗೆ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಬೆಂಗಳೂರಿನ ಕಚೇರಿಗೆ ಅಪರಿಚಿತ ವ್ಯಕ್ತಿ ಇ-ಮೇಲ್ ಮಾಡಿದ್ದಾನೆ. divijpprabhakaralakshmi@ gmail.com ಇ-ಮೇಲ್ ನಿಂದ ಸಂದೇಶ ಬಂದಿದೆ, ಮತ್ತು ಇದು ಒಬ್ಬರೇ ಮಾಲೀಕತ್ವದ ಖಾಸಗಿ ಶಾಲಾ-ಕಾಲೇಜಾಗಿದೆ.
ಮಂಜೇಗೌಡ ಎಂಬುವವರು ಮೂರು ಶಾಲೆಗಳ ಪ್ರಾಂಚೈಸಿ ಪಡೆದಿದ್ದು, ಹಾಸನದ ವಿಜಯನಗರ
ಇಂಡಸ್ಟ್ರಿಯಲ್ ಏರಿಯಾ ಮತ್ತು ಕೆ.ಆರ್.ಪುರಂನಲ್ಲಿರುವ ವಿದ್ಯಾಸೌಧ ಕಾಲೇಜು, ಪಬ್ಲಿಕ್ ಶಾಲೆ ಹಾಗೂ ಕಿಡ್ಸ್ ಸೇರಿ ಮೂರು ಶಾಲೆ ನಡೆಸುತ್ತಿದ್ದಾರೆ. ಮೂರೂ ಕಡೆಗಳನ್ನು ಇಂದು ಮಧ್ಯಾಹ್ನ 1 ಗಂಟೆಗೆ ಸ್ಪೋಟಿಸುವುದಾಗಿ ಮೇಲ್ ಮಾಡಲಾಗಿದೆ. ಇದೇ ಸಂಸ್ಥೆಗೆ ಸೇರಿದ ಕಾಲೇಜು ಹೈದರಾಬಾದ್‌ನಲ್ಲಿದ್ದು, ಅಲ್ಲಿ ನಡೆದಿರುವ ಅಪರಾಧ ಪ್ರಕರಣವೊಂದರ ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮೇಲ್ ಮಾಡಲಾಗಿದೆ ಎನ್ನಲಾಗಿದೆ.
ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಶಾಲೆಯ ಪ್ರಾಂಶುಪಾಲರು ದೂರು ನೀಡಿದ್ದು, ತಡರಾತ್ರಿ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ಯಾಡ್ ಹಾಗೂ ಪೊಲೀಸರು ಮೂರು ಕಡೆ ಶಾಲೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಯಾವುದೇ ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಮೂರು ಶಾಲೆಗಳ ಬಳಿ ಒಬ್ಬೊಬ್ಬ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ನಿಯೋಜಿಸಲಾಗಿದೆ.
previous post
next post